ಕುಣಿಯುತ ನಲಿಯುತ ಬಾ ಶಂಕರ Kuniyuta Naliyuta Ba Shankara Kannada Lyrics

 Kuniyuta Naliyuta Ba Shankara Lyrics in Kannada language. 

ಕುಣಿಯುತ ನಲಿಯುತ ಬಾ ಶಂಕರ Kuniyuta Naliyuta Ba Shankara Kannada Lyrics

ಕುಣಿಯುತ ನಲಿಯುತ ಬಾ ಶಂಕರ
ಮಣಿಯುವೆ ನಿನ್ನಡಿಗನುದಿನ ಮುರಹರ ||

ಢಣಢಣ ಢಣಢಣ ಎಂದು ಡಮರುಗ ಧ್ವನಿಸಲು
ಠಣಠಣಠಣ ಎಂದು ವೃಷಭವು ನಲಿಯೇ
ಝುಣತಕ ತಕಝುಣ ತಾಕಿಟ ತಕ ಕಿಟ
ಝುಣ ಎಂದು ನಂದಿ ಮೃದಂಗವ ಬಾರಿಸಲು ||೧||

ಹರಹರಹರಹರ ಎಂದು ಗಣಗಳು ಸ್ತುತಿಸಲು
ಪೊರೆಯಂದಹಿವಿದ್ದು ಗಂಗೆಯು ನಮಿಸೆ
ಸರಿಗಮಪದನಿಸ ಸ್ವರಗಳ ಪಾಡುತ
ನಾರದ ತುಂಬುರ ಗಾನವ ಮಾಡಲು ||೨||

ವರಕಮಲೇಶನ ಚರಿತೆಯ ಜಗದೊಳು
ಪರಿಪರಿ ಭಾವದಿ ನರ್ತಿಸಿ ತೋರುತ
ಪೊರೆಯುತ ಭಕುತರ ವರವೀಯುತ ಬಾ
ಗಿರಿಜಾಲಿಂಗಿತ ನಾಟ್ಯಾಚಾರ್ಯ ||೩||


ಕುಣಿಯುತ ನಲಿಯುತ ಬಾ ಶಂಕರ Kuniyuta Naliyuta Ba Shankara Kannada Lyrics


Comments

Search Hindu Devotional Topics

Contact Hindu Devotional Blog

Name

Email *

Message *